ಕನ್ನಡ ವರ್ಣಮಾಲೆ

ಕನ್ನಡ ವರ್ಣಮಾಲೆ:

ವರ್ಣಮಾಲೆ:    ಕನ್ನಡ ಭಾಷೆಯ ವರ್ಣಮಾಲೆಯಲ್ಲಿ 49 ಅಕ್ಷರಗಳಿವೆ. ವರ್ಣಮಾಲೆಯನ್ನು ಸ್ವರಗಳು, ವ್ಯಂಜನಗಳು ಮತ್ತು ಯೋಗವಾಹಕಗಳೆಂದು ವಿಂಗಡಿಸಲಾಗಿದೆ.

ಸ್ವರಗಳು:    ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತ್ತಾರೆ. ಉದಾ: ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ. ಒಟ್ಟು ಸ್ವರಗಳ ಸಂಖ್ಯೆ 13. ಸ್ವರಗಳನ್ನು ಮತ್ತೆ ಹ್ರಸ್ವ ಸ್ವರ, ದೀರ್ಘ ಸ್ವರ ಮತ್ತು ಪ್ಲುತ ಸ್ವರವೆಂದು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.

ಹ್ರಸ್ವ ಸ್ವರ:    ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಹ್ರಸ್ವಸ್ವರ ಅಕ್ಷರಗಳು       ಎನ್ನಲಾಗುತ್ತದೆ. ಒಟ್ಟು ಆರು ಹ್ರಸ್ವ ಸ್ವರಗಳಿವೆ. ಉದಾ: ಅ ಇ ಉ ಋ ಎ ಒ.

ದೀರ್ಘ ಸ್ವರ:      ಎರಡು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ದೀರ್ಘ ಸ್ವರ ಎಂದು    ಕರೆಯಲಾಗುವುದು. ಒಟ್ಟು 7 ದೀರ್ಘಸ್ವರಗಳಿವೆ. ಉದಾ: ಆ ಈ ಊ ಏ ಓ ಐ

ಪ್ಲುತ ಸ್ವರ: ಮೂರು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಪ್ಲುತ ಸ್ವರ ಎನ್ನಲಾಗಿದೆ. ಬೇರೆಯವರನ್ನು ಕರೆಯುವಾಗ ಪ್ಲುತ ಸ್ವರಗಳು ಬರುತ್ತವೆ. ಉದಾ: ಅಮ್ಮಾ, ಅಕ್ಕಾ 
ಸಂಧ್ಯಾಕ್ಷರಗಳು
          4 ವರ್ಣಗಳಾದ ಏ, ಐ, ಒ, ಔ ಸಂಧ್ಯಾಕ್ಷರಗಳಾಗಿವೆ.

ವ್ಯಂಜನಗಳು: 
       ಸ್ವರಗಳಿಂದ ಸಹಾಯದಿಂದ ಉಚ್ಚರಿಸಲಾಗುವ ಅಕ್ಷರಳನ್ನು ವ್ಯಂಜನಗಳು ಎನ್ನುತ್ತಾರೆ. ವರ್ಣಮಾಲೆಯಲ್ಲಿ ಕ ಯಿಂದ ಳ ವರೆಗೆ ಒಟ್ಟು 34 ಅಕ್ಷರಗಳಿದ್ದು, ಇವುಗಳನ್ನು ವ್ಯಂಜನಗಳು ಎನ್ನುತ್ತಾರೆ. ವ್ಯಂಜನಗಳನ್ನು ವರ್ಗೀಯ ವ್ಯಂಜನ ಮತ್ತು ಅವರ್ಗೀಯ ವ್ಯಂಜನವೆಂದು ವಿಂಗಡಿಸಲಾಗಿದೆ.

ವರ್ಗೀಯ ವ್ಯಂಜನಾಕ್ಷರಗಳು:    
  
ಸ್ವರಗಳ ಸಹಾಯದಿಂದ ಹಾಗೂ ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸುವ ಎಲ್ಲಾ ಕಾಗುಣಿತಾಕ್ಷರಗಳಿಗೆ ವರ್ಗೀಯ ವ್ಯಂಜನಾಕ್ಷರಗಳು ಎನ್ನಲಾಗುತ್ತದೆ. ಒಟ್ಟು 25 ವರ್ಗೀಯ ವ್ಯಂಜನಾಕ್ಷರಗಳಿವೆ.

ಉದಾ: ಕ ವರ್ಗ – ಕ ಖ ಗ ಘ ಙ, ಚ ವರ್ಗ – ಚ ಛ ಜ ಝ ಞ, ಟ ವರ್ಗ – ಟ ಠ ಡ ಢ ಣ, ತ ವರ್ಗ – ತ ಥ ದ ಧ ನ, ಪ ವರ್ಗ– ಪ ಫ ಬ ಭ ಮ.
ವರ್ಗೀಯ ವ್ಯಂಜನಾಕ್ಷರಗಳನ್ನು ಮತ್ತೆ ಮೂರು ವಿಧಗಳಾಗಿ ಅಂದರೆ
ಅಲ್ಪ ಪ್ರಾಣಾಕ್ಷರಗಳು,
ಮಹಾ ಪ್ರಾಣಾಕ್ಷರಗಳು
ಅನುನಾಸಿಕಾಕ್ಷರಗಳೆಂದು ,ವಿಂಗಡಿಸಲಾಗಿದೆ.

ಅಲ್ಪ ಪ್ರಾಣಾಕ್ಷರಗಳು(10):

ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಕಾಗುಣಿತಾಕ್ಷರಗಳಿಗೆ ಅಲ್ಪ ಪ್ರಾಣಾಕ್ಷರಗಳು ಎನ್ನಲಾಗಿದೆ. ಉದಾಹರಣೆ ಕ, ಚ, ಟ, ತ, ಪ, ಗ, ಜ, ಡ, ದ, ಬ
.
ಮಹಾ ಪ್ರಾಣಾಕ್ಷರಗಳು(10):

ಹೆಚ್ಚು ಉಸಿರಿನಿಂದ ಉಚ್ಚರಿಸಲ್ಪಡುವ ಎರಡನೆಯ ಮತ್ತು ನಾಲ್ಕನೆಯ ವ್ಯಂಜನಗಳಿಗೆ ಮಹಾ ಪ್ರಾಣಾಕ್ಷರಗಳು ಎನ್ನಲಾಗಿದೆ. ಉದಾಹರಣೆ ಖ, ಛ ,ಠ, ಧ, ಫ, ಘ, ಝ, ಢ, ಧ, ಭ.
ಅನುನಾಸಿಕಾಕ್ಷರಗಳು (5):

ಮೂಗಿನ ಸಹಾಯದಿಂದುಚ್ಚರಿಸಲ್ಪಡುವ ವರ್ಣಕ್ಕೆ ಅನುನಾಸಿಕಾಕ್ಷರಗಳು ಎನ್ನಲಾಗಿದೆ. 
ಉದಾಹರಣೆ ಙ, ಞ, ಣ, ನ, ಮ.


ಅವರ್ಗೀಯ ವ್ಯಂಜನಾಕ್ಷರಗಳು:(9)

 ಯಾವುದೇ ಗುಂಪಿಗೆ ಸೇರಿರದ ಅಕ್ಷರಗಳನ್ನು ಅವರ್ಗೀಯ ವ್ಯಂಜನಾಕ್ಷರಗಳೆಂದು ಕರೆಯಲಾಗುತ್ತದೆ. 
ಉದಾಹರಣೆ :ಯ, ರ, ಲ, ವ, ಶ, ಷ, ಸ ,ಹ, ಳ. ಒಟ್ಟು 9 ಅಕ್ಷರಗಳು

ಯೋಗವಾಹಗಳು:(02)

 ಅಂ ಅಃ ಗಳನ್ನು ಯೋಗವಾಹಕಗಳೆನ್ನುತ್ತಾರೆ. ಯೋಗವಾಹಕಗಳಲ್ಲಿ ಮತ್ತೆ ಎರಡು ವಿಧಗಳನ್ನು ಕಾಣಬಹುದು. ಅವುಗಳೆಂದರೆ  ಅನುಸ್ವಾರ (ಂ) ಮತ್ತು ವಿಸರ್ಗ (ಃ)

ಸಂಯುಕ್ತಾಕ್ಷರ:

               ಯಾವುದಾದರೂ ಒಂದು ಪದದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವ್ಯಂಜನಗಳು ಒಂದರ ನಂತರ ಒಂದು ಬಂದು ಅವುಗಳಾದ ಮೇಲೆ ಒಂದು ಸ್ವರ ಬಂದರೆ ಅಂತಹ ಅಕ್ಷರಗಳನ್ನು ಸಂಯುಕ್ತಾಕ್ಷರ/ಒತ್ತಕ್ಷರ ಎಂದು ಕರೆಯಲಾಗುತ್ತದೆ.
ಸಂಯುಕ್ತಾಕ್ಷರಗಳನ್ನು ಎರಡು ವಿಧಗಳಿವೆ. ಅವುಗಳೆಂದರೆ

ಸಜಾತೀಯ ಸಂಯುಕ್ತಾಕ್ಷರ.
ವಿಜಾತೀಯ ಸಂಯುಕ್ತಾಕ್ಷರ.


ಸಜಾತೀಯ ಸಂಯುಕ್ತಕ್ಷರ:
ಒಂದು ವ್ಯಂಜನಕ್ಕೆ ಅದೇ ವ್ಯಂಜನಾಕ್ಷರ ಸೇರಿದರೆ ಅದು ಸಜಾತೀಯ ಸಂಯುಕ್ತಕ್ಷರ.
 ಉದಾಹರಣೆ: ಅಪ್ಪ, ಅಮ್ಮ, ಅಕ್ಕ, ಹಗ್ಗ

ವಿಜಾತೀಯ ಸಂಯುಕ್ತಕ್ಷರ:
ಒಂದು ವ್ಯಂಜನಕ್ಕೆ ಬೇರೆ ವ್ಯಂಜನಾಕ್ಷರ ಸೇರಿದರೆ ಅದು ವಿಜಾತೀಯ ಸಂಯುಕ್ತಕ್ಷರ.
 ಉದಾಹರಣೆ: ಅಗ್ನಿ, ಪುಸ್ತಕ, ಶಬ್ದ 





..............ಧನ್ಯವಾದಗಳು,,,,,,,,, 

Comments

  1. ಅದು ಹ್ರಸ್ವ ಅಲ್ಲ ಹೃಸ್ವ ಸ್ವರ ಆಗ ಬೇಕು ಅನಿಸುತ್ತದೆ.

    ReplyDelete
  2. ಕನ್ನಡ ವರ್ಣಮಾಗೆ ಆಧಾರ ವಾಗಿರುವ ಭಾಷೆ ಯಾವುದು

    ReplyDelete
  3. Best casino bonuses? - DrmCD
    Casino 파주 출장안마 Bonuses and Promotions 동두천 출장안마 2021 양주 출장마사지 — Casino Bonuses and Promotions – December 2021. For the casino players, the 여수 출장마사지 games they enjoy 광주 출장샵 include free spins,

    ReplyDelete

Post a Comment

Popular posts from this blog

The Muzaffarpur Conspiracy Case (1908)

Co-curricular Activities: Meaning, Definition, Examples, Importance.