ದ್ವಿತೀಯ ತತ್ಪುರುಷ ಸಮಾಸ ಎಂದು ಯಾವುದನ್ನೂ ಕರೆಯುತ್ತಾರೆ?

 ದ್ವಿತೀಯ ತತ್ಪುರುಷ ಸಮಾಸ ಎಂದು ಯಾವುದನ್ನೂ ಕರೆಯುತ್ತಾರೆ?

ದ್ವಿಗು ಸಮಾಸ



ಪೂರ್ವ ಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಂದಿಗೆ ಸೇರಿ ಆಗುವ ಸಮಾಸಕ್ಕ್ಕೆ ದ್ವಿಗು ಸಮಾಸವೆಂದು ಹೆಸರು. 

ಎರಡು+ಕೆಲ=ಇಕ್ಕೆಲ (ಇರ್ಕೆಲ), ಮೂರು+ಮಡಿ=ಮುಮ್ಮಡಿ -ಇಕ್ಕೆಲ, ಮುಮ್ಮಡಿ ಇತ್ಯಾದಿ ಸಮಸ್ತಪದಗಳು ಪೂರ್ವದ ಪದವು ಸಂಖ್ಯಾವಾಚಕವಾಗಿ ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗಿವೆ. 

ದ್ವಿಗುಸಮಾಸವೆಂದರೆ ಪೂರ್ವಪದವು ಸಂಖ್ಯಾವಾಚಕವಾಗಿಯೇ ಇರಬೇಕು. 

 ದ್ವಿಗುಸಮಾಸ:- ಪೂರ್ವಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗುಸಮಾಸವೆನಿಸುವುದು. (ಇದೂ ಕೂಡ ತತ್ಪುರುಷ ಸಮಾಸದ ಒಂದು ಭೇದವೇ ಎಂದು ಹೇಳುವರು.)

  • ಎರಡು+ಕೆಲ=ಇಕ್ಕೆಲ
  • ಮೂರು+ಮಡಿ=ಮುಮ್ಮಡಿ

ಇಲ್ಲಿ, ಸಂಖ್ಯಾವಾಚಕವಾದ ಪೂರ್ವ ಪದವು, ಉತ್ತರದಲ್ಲಿರುವ ನಾಮಪದದೊಂದಿಗೆ ಸೇರಿ ಸಮಸ್ತಪದವಾಗಿದೆ. ದ್ವಿಗು ಸಮಾಸದಲ್ಲಿ, ಪೂರ್ವ ಪದವು ಸಂಖ್ಯಾವಾಚಕವಾಗಿರಲೇ ಬೇಕು.

  • ಕನ್ನಡ - ಕನ್ನಡ ಪದಗಳು
  1. ಒಂದು+ಕಟ್ಟು = ಒಗ್ಗಟ್ಟು
  2. ಎರಡು+ಮಡಿ = ಇಮ್ಮಡಿ
  3. ನಾಲ್ಕು+ಮಡಿ = ನಾಲ್ವಡಿ
  4. ಐದು+ಮಡಿ = ಐವಡಿ
  5. ಎರಡು+ಬಾಳ್ = ಇರ್ವಾಳ್
  6. ಮೂರು+ಗಾವುದ = ಮೂಗಾವುದ
  7. ಒಂದು+ಕಣ್ಣು = ಒಕ್ಕಣ್ಣು

 

  • ಸಂಸ್ಕೃತ - ಸಂಸ್ಕೃತ ಪದಗಳು
  1. ಪಂಚಗಳಾದ+ಇಂದ್ರಿಯಗಳು = ಪಂಚೇಂದ್ರಿಯಗಳು
  2. ಸಪ್ತಗಳಾದ+ ಅಂಗಗಳು = ಸಪ್ತಾಂಗಗಳು
  3. ದಶಗಳಾದ+ಮುಖಗಳು = ದಶಮುಖಗಳು
  4. ಅಷ್ಟಾದಶಗಳಾದ+ಪುರಾಣಗಳು = ಅಷ್ಟಾದಶಪುರಾಣಗಳು
  5. ಏಕವಾದ+ಅಂಗ = ಏಕಾಂಗ

Comments

Popular posts from this blog

The Muzaffarpur Conspiracy Case (1908)

Co-curricular Activities: Meaning, Definition, Examples, Importance.